ಪೋಲಿಷ್ ಸಾಹಿತ್ಯ -	ಪ್ರಾರಂಭದ ಪೋಲಿಷ್ ಸಾಹಿತ್ಯದ ಹೆಚ್ಚು ಭಾಗ ಲ್ಯಾಟಿನ್ನಿನಲ್ಲಿದೆ. ಮಾತೃಭಾಷೆಯಲ್ಲಿ (ಪೋಲಿಷ್) ಬರೆಯಲು ತೊಡಗಿದವರಲ್ಲಿ ಒಬ್ಬನಾದ ಮಿಕೊಲಾಜ್‍ರೇ (1501-1569) ಪೋಲಿಷ್ ಸಾಹಿತ್ಯದ ಜನಕ. 16ನೆಯ ಶತಮಾನದ ಉತ್ತರಾರ್ಧ ಪೋಲಿಷ್ ಸಾಹಿತ್ಯದ ಸ್ವರ್ಣಯುಗ. ರೇಯ ಈ ಕಾಲದ ಗದ್ಯ ಕೃತಿಗಳು. (ಪ್ರಾಮಾಣಿಕ ಮನುಷ್ಯನೊಬ್ಬನ ಜೀವನ ಈತನ ಮುಖ್ಯ ಕೃತಿ) ಜಾನ್ ಕಾಚಾನೌಸ್ಕಿಯ (1530-1584) ಭಾವಗೀತೆಗಳು ಗಣನೀಯವಾಗಿವೆ, ಕಾಚಾನೌಸ್ಕಿ ತನ್ನ ಕಾಲದ ಅತಿ ಪ್ರಸಿದ್ಧ ಕವಿ. ಹದಿನೇಳನೆಯ ಶತಮಾನದ ಟ್ವಾರ್ಡೌಸ್ಕಿ (1600-1660) ಮತ್ತು ವಾಕ್ಲಾ (1625-1696) ಅವರ ಐತಿಹಾಸಿಕ ಮಹಾ ಕಾವ್ಯಗಳು ಮತ್ತು ಆಂರ್ಡ್‍ಜೆಜ್ ಮಾರ್ಸ್‍ಟಿನ್ನನ (1613-1693) ಭಾಷಾಂತರ ಪದ್ಯ ಕೃತಿಗಳು ಮತ್ತು ಭಾವಗೀತೆಗಳು ಸ್ಮರಣಾರ್ಹ. 18ನೆಯ ಶತಮಾನ ಜ್ಞಾನೋದಯದ ಕಾಲ. ವಿಡಂಬನ ಪದ್ಯಗಳು ಮತ್ತು ಪ್ರಥಮ ಆಧುನಿಕ ಪೋಲಿಷ್ ಕಾದಂಬರಿ ದಿ ಅಡ್ವೆಂಚರ್ಸ್ ಆಫ್ ನಿಕಲಸ್ ಡಾಸ್ವಿಯಾ ಧಾಜಿನ್ಸ್ಕಿಯನ್ನು ಇಗ್ನೇಸಿ ಕ್ರಾಸಿಕ್ಕಿ ಈ ಕಾಲದ ಪ್ರಸಿದ್ಧ ಲೇಖಕ. ಇದೇ ಕಾಲದಲ್ಲಿ ಪೋಲಿಷ್ ನಾಟಕದ ಉದಯವೂ ಆಯಿತು. ರಾಜಕೀಯ ಸ್ವಾತಂತ್ರ್ಯವನ್ನು ಕಳೆದುಕೊಂಡ 1820ರ ದಶಕದಲ್ಲಿ ಪೋಲೆಂಡಿನಲ್ಲಿ ರೊಮ್ಯಾಂಟಿಕ್ ಚಳವಳಿಯ ಉದಯವಾಯಿತು. ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಪೋಲಿಷ್ ಮಹಾಕವಿ ಆ್ಯಡಮ್ ಮಿಕಿವಿಜ್ (1798-1855) ರೊಮ್ಯಾಂಟಿಕ್ ಸಂಪ್ರದಾಯದ ಪ್ರಮುಖ ಲೇಖಕ. ರಂಜನಕಾವ್ಯ, ಸಾನೆಟ್ ಭಾವಗೀತೆ ಕಾವ್ಯಕತೆಗಳನ್ನೂ ದಿ ಫೋರ್ ಫಾದರ್ಸ್ ಎಂಬ ರಂಜಕ ನಾಟಕವನ್ನೂ ಬರೆದ. ಈತನ ಪಾನ್ ತಾಡ್ಯಜ ಎಂಬ ಕೃತಿಯನ್ನು ಐರೋಪ್ಯ ಸಾಹಿತ್ಯದಲ್ಲಿನ ಒಂದೇ ಒಂದು ವೀರಮಹಾಕಾವ್ಯವೆಂದು ಅನೇಕ ವಿದೇಶಿ ವಿಮರ್ಶಕರು ಶ್ಲ್ಯಾಘಿಸಿದ್ದಾರೆ. ಅವನು ಪ್ರಪಂಚ ಸಾಹಿತ್ಯದಲ್ಲಿ ಪೋಲೆಂಡಿಗೆ ಗಮನೀಯ ಸ್ಥಾನವನ್ನು ಒದಗಿಸಿಕೊಟ್ಟ. ಅವನ ಅನಂತರ ಬರುವ ಪ್ರಸಿದ್ಧ ಲೇಖಕ ಭಾವಗೀತೆ ಮತ್ತು ಕಾವ್ಯ ನಾಟಕಗಳನ್ನು ರಚಿಸಿದ ಜ್ಯೂಲಿಯಸ್ ಸ್ಲೌವಾಕಿ (1809-1849). ಅವನು ಆಧುನಿಕ ಪೋಲಿಷ್ ನಾಟಕದ ಆರಂಭಕಾರ. ಅವನ ಹಾಟ್ರ್ಸ್‍ಟೆನ್ಸ್ಕಿ ಮತ್ತು ಫ್ಯಾಂಟಸಿ ಎಂಬ ನಾಟಕಗಳು, ಬೆನ್ನಿಯೌಸ್ಕಿ ಎಂಬ ಕಥಾಕಾವ್ಯ ಮತ್ತು ಕಿಂಗ್ ಸ್ವಿರಿಟ್ ಎಂಬ ಮಹಾಕಾವ್ಯ ಸ್ಮರಣೀಯವಾಗಿವೆ. ಮೂರನೆಯ ಪ್ರಸಿದ್ಧ ರೊಮ್ಯಾಂಟಿಕ್ ಲೇಖಕ ತಾತ್ತ್ವಿಕಕವಿ ಸಿಗ್ಮಂಟ್ ಕ್ರಾಸಿನ್ಸ್ಕಿ (1812-59) ತನ್ನ ರಂಜಕ ಸಾಮಾಜಿಕ ನಾಟಕ ದಿ ಅನ್ ಡಿವೈನ್ ಕಾಮಿಡಿಯಲ್ಲಿ ಆಧುನಿಕ ಸಮಸ್ಯೆಯಾದ ವರ್ಗೀಯ ಹೋರಾಟ ಮತ್ತು ಕ್ರಾಂತಿಗಳನ್ನು ಚಿತ್ರಿಸಿದ್ದಾನೆ. ಅವನ ಇಂಡಿಯನ್ ಎಂಬುದು ರೋಮನ್ನರ ವಿರುದ್ಧ ಗ್ರೀಕರ ವಿಫಲ ಹೋರಾಟವನ್ನು ಚಿತ್ರಿಸುವ ಗದ್ಯ ದುರಂತ. 19ನೆಯ ಶತಮಾನದ ಪೂವಾರ್ಧ ಲೇಖಕರಲ್ಲಿ ನಾಟಕಕಾರ ಫ್ರೆಡ್ರೋ (1793-1876) ಕಾಲ್ಲೋಕೇಷನ್ ಎಂಬ ಸ್ಮರಣೀಯ ಕಾದಂಬರಿಯನ್ನು ರಚಿಸಿದ ಕಾದಂಬರಿಗಳ ಲೇಖಕ ಜೋಸೆಫ್ ಕಾಸೆನಿಯೌಸ್ಕಿ (1797-1863) ಸೇರುತ್ತಾರೆ. 1863ರ ದಂಗೆಯ ವಿಫಲತೆಯೊಡನೆ ರೊಮ್ಯಾಂಟಿಕ್ ಸಂಪ್ರದಾಯ ಕೊನೆಗೊಂಡಿತು. ಅಂದಿನಿಂದ ದೃಷ್ಟಪ್ರಮಾಣವಾದಿ (ಪಾಸಿಟೀವಿಸಮ್) ಸಂಪ್ರದಾಯ ಮೊದಲಾಯಿತು. ಈ ಸಂಪ್ರದಾಯದ ಲೇಖಕರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಮತ್ತು ನೈತಿಕ ಸಮಸ್ಯೆಗಳನ್ನು ಯಥಾರ್ಥ ರೀತಿಯಲ್ಲಿ ಚಿತ್ರಿಸತೊಡಗಿದರು. ಬೋಲೆಸ್ಲಾಪ್ರಸ್ ಎಂಬ ಗುಪ್ತನಾಮದಿಂದ ಬರೆಯುತ್ತಿದ್ದ ಅಲೆಕ್ಸಾಂಡರ್ ಗ್ಲೋವಾಕಿ (1845-1912) ಕಾದಂಬರಿಯಲ್ಲಿ ಯಥಾರ್ಥತೆ ಮತ್ತು ದೃಷ್ಟಪ್ರಮಾಣವಾದಿ ಸಂಪ್ರದಾಯಗಳ ಪ್ರಮುಖ ಪ್ರತಿಪಾದಕ. ಅವನು ಪೋಲಿಷ್ ಸಾಹಿತ್ಯಕ್ಕೆ ಅನೇಕ ಉತ್ತಮ ಸಣ್ಣ ಕತೆಗಳನ್ನೂ ದಿ ಡಾಲ್ ಎಂಬ ಶ್ರೇಷ್ಠ ಆಧುನಿಕ ಕಾದಂಬರಿಯನ್ನೂ ಕೊಟ್ಟ. ದಿ ಡಾಲ್ 19ನೆಯ ಶತಮಾನದ ಪೂರ್ವಾರ್ಧದ ಪೋಲಿಷ್ ಸಮಾಜವನ್ನು ಚಿತ್ರಿಸುವ ಕಾದಂಬರಿ. ಯೂರೋಪಿನ ಪ್ರಖ್ಯಾತ ಲೇಖಕ ಮತ್ತು ನೋಬೆಲ್ ಪ್ರಶಸ್ತಿ ವಿಜೇತ ಹೆನ್ರಿಕ್ ಸಿಯೆನ್ಕಿವಿಜ್ (1846-1916) ಎಂಬಾತ ವಿತ್ ಫೈರ್ ಅಂಡ್ ಸ್ವೋರ್ಡ್, ದಿ ಡೆಲ್ಯೂಜ್ ಕೋ ವಾಡೀಸ್ ಮತ್ತು ದಿ ಟ್ಯೂಟಾನಿಕ್ ನೈಟ್ಸ್ ಎಂಬ ಐತಿಹಾಸಿಕ ಕಾದಂಬರಿಗಳನ್ನು ಬರೆದ. 

ಆ್ಯಡಮ್ ಆಸ್ನಿಕ್ (1838-1897) ಮತ್ತು ಮಾರ್ಜಾ ಕಾನಪ್ನಿಕಾ (1842-1910) ಈ ಕಾಲದ ಹೆಸರಾಂತ ಕವಿಗಳು. ಎಲಿಜಾ ಆರ್ಜೆಸ್‍ಕೊವಾ (1841-1890). ಇದೇ ಕಾಲದ ಲೇಖಕಿ. ಸಣ್ಣ ಕತೆ ಮತ್ತು ಕಾದಂಬರಿಗಳ ಈ ಲೇಖಕಿಯ ಗಮನಾರ್ಹ ಕೃತಿ ಆನ್ ದಿ ಬ್ಯಾಂಕ್ ಆಫ್ ನೈಮೆನ್ ಲಿತೂನಿಯಾದ ಗ್ರಾಮೀನ ಜೀವನವನ್ನು ಚಿತ್ರಿಸುತ್ತದೆ. 19ನೆಯ ಶತಮಾನದ ಅಂತ್ಯದಲ್ಲಿ ದೃಷ್ಟ ಪ್ರಮಾಣವಾದ ಮತ್ತು ಯಥಾರ್ಥತೆಗಳ ವಿರುದ್ಧ ಪ್ರತಿಕ್ರಿಯೆ ಪ್ರಾರಂಭವಾಯಿತು. 1890ರಿಂದ 1914ರವರೆಗಿನ ಕಾಲವನ್ನು ತರುಣ ಪೋಲೆಂಡ್ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಲೇಖಕರು ಸಂಕೇತ ವಿಧಾನವನ್ನು ಅನುಸರಿಸಿದರು. ಕವಿಗಳಾದ ಜಾನ್ ಕಾಸ್ಟ್ರೋವಿಜ್ (1860-1926) ಲಿಯೊಪಾಲ್ಡ್ ಸ್ಟಾಫ್. ಕಾದಂಬರಿಕಾರರಾದ ಸ್ಟೆಫಾನ್ ಜೆರೊವಿಸ್ಕಿ (1864-1925) ವಾಡಿಸ್ಲಾವ್ ರೇಮಾಂಟ್ (1867-1925) ಈ ಕಾಲದ ಲೇಖಕರು. ವರ್ಣಚಿತ್ರಕಾರ ಮತ್ತು ಕವಿ ಸ್ಟಾನಿಸ್ಲಾವ್ ವಿಸ್ಪಿಯಾನ್ಸ್ಕಿ (1869-1907) ನಾಟಕಗಳಲ್ಲಿ ನವಚೈತನ್ಯಕ್ಕೆ ಕಾರಣನಾದ. ಆತ ತನ್ನ ಕೃತಿಗಳಲ್ಲಿ ಗ್ರೀಕ್ ದುರಂತ ನಾಟಕ, ಶೇಕ್ಸ್‍ಪಿಯರ್, ರೊಮ್ಯಾಂಟಿಕ್ ಸಂಪ್ರದಾಯದ ನಾಟಕ ಮತ್ತು ಪೋಲಿಷ್ ಜಾನಪದ ನಾಟಕಗಳ ಮೂಲಾಂಶಗಳನ್ನು ಒಂದುಗೂಡಿಸಿದ. 1918ರ ಅನಂತರ ಮರುಜನ್ಮ ತಾಳಿದ ಪೋಲೆಂಡಿನ ಸಾಹಿತ್ಯದಲ್ಲಿ ಹೊಸತನ ಕಂಡುಬಂತು. ಸ್ಕಾಮಾಂಡ್ರೈಟ್ಸ್ ಎಂದು ಕರೆಯಲಾಗುವ ಹೊಸ ಪೀಳಿಗೆಯ ಭಾವಗೀತಕಾರರು ರಾಜಕೀಯ ಉಪಾಧಿಗಳಿಂದ ಪೋಲಿಷ್ ಸಾಹಿತ್ಯದ ಮೇಲೆ ಬಲವಂತವಾಗಿ ಹೇರಲಾಗಿದ್ದ ದೇಶಪ್ರೇಮ ಮತ್ತು ಸಮಾಜಸೇವೆಯನ್ನು ನಿರಾಕರಿಸಿದರು. ಅವರು ಒಳ್ಳೆಯ ಕವಿತೆಗಳನ್ನು ರಚಿಸುವುದೇ ತಮ್ಮ ಗುರಿ ಎಂದರು. ಕಾವ್ಯ ಭಾಷೆ, ಪದ್ಯ ರಚನೆ ಮತ್ತು ಸ್ವರೂಪಗಳ ನವ್ಯತೆಯ ಮೂಲಕ ಅವರು ಪೋಲಿಷ್ ಕಾವ್ಯವನ್ನು ಅಭಿವೃದ್ಧಿಗೊಳಿಸಿದರು. ಜ್ಯೂಲಿಯನ್ ತುವಿಮ್ (1894-1953) ಆ್ಯಂಟನಿ ಸ್ಲೋನಿಮ್ಸ್ಕಿ, ಜಾನ್ ಲೆಚಾನ್, ಕಾಜಿಮಿರ್ಜ್ ವಿರ್ಜಿನ್ಸ್ಕಿ-ಈ ನವಕವಿಗಳ ಈ ಕಾಲದ ನಾಟಕಗಳಲ್ಲಿ ಯಥಾರ್ಥವಾದ ತಿರುಗಿ ತಲೆಯೆತ್ತಿತು. ಐತಿಹಾಸಿಕ ಕಾದಂಬರಿಗಳು ಹೊರಬಂದವು. 1939ರಲ್ಲಿ ಜರ್ಮನ್ನರಿಂದ ಪೋಲೆಂಡಿನ ಆಕ್ರಮಣವಾದ ಅನಂತರ ಎಲ್ಲ ಸಾಂಸ್ಕøತಿಕ ಮತ್ತು ಸಾಹಿತ್ಯ ಜೀವನ ಅಂತ್ಯಗೊಂಡಂತೆ ಕಂಡಿತಾದರೂ ಪೋಲಿಷ್ ಲೇಖಕರು ದೇಶದ ಒಳಗೂ ಹೊರಗೂ ಕ್ರಿಯಾಶೀಲರಾಗಿಯೇ ಇದ್ದರು. ಪ್ರಮುಖ ಸಾಹಿತಿಗಳು ದೇಶದಿಂದ ಹೊರಬಿದ್ದು ವಿಶೇಷವಾಗಿ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿದ್ದುಕೊಂಡು ಅನೇಕ ಕೃತಿಗಳನ್ನು ಪ್ರಕಟಿಸಿದರು. ದೇಶದಿಂದ ಜರ್ಮನ್ನರ ಉಚ್ಚಾಟನೆಯಾದ ಬಳಿಕ ಸಾಹಿತ್ಯ ರಂಗದಲ್ಲಿ ಚಟುವಟಿಕೆ ಹೆಚ್ಚಿತು. ವರ್ತಮಾನ ಕಾಲದ ಅನೇಕ ತರುಣ ಲೇಖಕರು ಸಾಹಿತ್ಯ ರಚನೆಯಲ್ಲಿ ತೊಡಗಿದರು.											(ಜೆ.ಕೆ.ಯು.)

	ಕ್ರಿ.ಶ 966ರಲ್ಲಿ ಪೋಲೆಂಡ್ ಕ್ರೈಸ್ತ ಸಂಸ್ಕøತಿಯ ವಲಯಕ್ಕೆ ಸೇರಿತು, ಇದರಿಂದ ಲ್ಯಾಟಿನ್ ಅದರ ಸಾಹಿತ್ಯದ ಭಾಷೆಯಾಯಿತು. ಪೋಲರ ಸಂಸ್ಕøತಿ ಮೂಲೆ ಪಾಲಾಯಿತು. ಪೋಲೆಂಡಿನ ಎಲ್ಲ ಶಾಲೆಗಳಲ್ಲಿ ಲ್ಯಾಟಿನ್ ಭಾಷೆ, ಆ ಭಾಷೆಯಲ್ಲಿನ ಸಾಹಿತ್ಯ ಇವನ್ನು ಹೇಳಿಕೊಡುತ್ತಿದ್ದರು.

	ಪೋಲೆಂಡಿನವರು ಲ್ಯಾಟಿನ್ ಭಾಷೆಯಲ್ಲಿ ಬರೆದ ಸಾಹಿತ್ಯವಿದೆ. ಜನರು ಗ್ಯಾಲಸ್ ಎಂದು ಕರೆದ ಅನಾಮಧೇಯ ಬರಹಗಾರನು 12ನೇ ಶತಮಾನದಲ್ಲಿ ಬರೆದ ಕ್ರಾನಿಕ್ರಾನ್ ಒಂದು ಜೀವನ ಚರಿತ್ರೆ.

	16ನೇ ಶತಮಾನದಲ್ಲಿ ಸಾಹಿತ್ಯದಲ್ಲಿ ತೇಜಸ್ವೀ ಯುಗ ಪ್ರಾರಂಭವಾಯಿತು. ಇದು ಇಡೀ 16ನೇ ಶತಮಾನದಲ್ಲಿ ನಡೆದ ನವೋದಯ. ಲ್ಯಾಟಿನ್‍ನಲ್ಲಿ ಮಿಯೊಚೊವ್‍ನ ಮಸಿವಿಜ್ ಚಾರಿತ್ರಿಕ ವೃತ್ತಾಂತಗಳನ್ನು ಬರೆದ. ಈ ಸಂಪ್ರದಾಯವನ್ನು ಹಲವರು ಮುಂದುವರಿಸಿದರು. ಆಂದ್ರೆeóï ಮಾಡ್ರ್eóÉವ್‍ಸ್ಕಿ ಲ್ಯಾಟಿನಿನಲ್ಲಿ ಬರೆದ `ದಿ ರಿಪಬ್ಲಿಕ ಎಮೆಂಡೆಂಡ (1551-54) ಕೃತಿಯಲ್ಲಿ ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ಚಿಂತನೆ ಪ್ರಕಟವಾಗಿದೆ. ಈ ಕಾಲದಲ್ಲಿ ನೀತಿ ಉಪದೇಶ ಭಾಷಣಗಳ ಮತ್ತು ಸಂತರ ಜೀವನ ಚರಿತ್ರೆಗಳ ರಚನೆ ಮುಂದುವರಿಯಿತು. ಈ ಕಾಲದಲ್ಲಿ ಕಾವ್ಯ ರಚನೆಯೂ ಸಮೃದ್ಧವಾಯಿತು.

	16ನೇ ಶತಮಾನದ ಮಧ್ಯಭಾಗದಲ್ಲಿ ಸಾಹಿತಿಗಳು ಲ್ಯಾಟಿನ್ ಭಾಷೆಯನ್ನು ಬಿಟ್ಟು ಪೋಲಿಷ್ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಮಿಕೊಲಾಜ್ ಕೇ ಪದ್ಯಗಳನ್ನು ನಾಟಕೀಯ ಸಂಭಾಷಣೆಗಳನ್ನು ನೀತಿ ಉಪದೇಶದ ಕೃತಿಗಳನ್ನು ರಚಿಸಿದ. ಈ ಕಾಲದ ಬಹು ಮುಖ್ಯ ಕವಿ ಜಾನ್ ಕಾಚಾನೊವ್‍ಸ್ಕಿ. ಇವನು ತನ್ನ ಮಗಳ ನೆನಪಿನಲ್ಲಿ ಬರೆದ ಕವನ ಮಾಲೆ `ಲ್ಯಾಮೆಂಟ್ಸ್, ಪ್ರಸಿದ್ಧವಾಗಿದೆ. ಇವನು `ದಿ ಡಿಸ್‍ಮಸಲ್ ಆಫ್ ದಿ ಗ್ರೀಷನ್ ಎನ್‍ವಾಯ್ಸ್ ಎನ್ನುವ ಟ್ರಾಜೆಡಿಯನ್ನು ಬರೆದ.

	ಹದಿನೇಳನೆಯ ಶತಮಾನ ರಾಜಕೀಯ ಪ್ರಕ್ಷುಬ್ಧತೆಯ ಕಾಲ. ಹಲವರು ಬರೆದ ದಿನಚರಿಗಳು ಸ್ವಾರಸ್ಯವಾಗಿವೆ. ಹಲವು ಕವನಗಳು ಚಾರಿತ್ರಿಕ ವಸ್ತುಗಳನ್ನು ಕುರಿತವು ಉದಾರಹರಣೆಗೆ, ವೆಸ್ ಪಾಜೈನ್ ಕಾಚವಸ್ಕಿಯ ಕವನಗಳು ವಾಚ್ಚಾ ಪಟೊಸಿ ಬರೆದ ಮಹಾಕಾವ್ಯ `ಖೊಟಿನ್ ಸಮರ (1670) ಪೋಲೆಂಡ್ ತುರ್ಕಿಯವರನ್ನು ಸೋಲಿಸಿದುದನ್ನು ಸಂಭ್ರಮದಿಂದ ಬಿತ್ತರಿಸುತ್ತದೆ. ಈ ಕಾಲದಲ್ಲಿ ಭಾವಗೀತೆಗಳು ರಚಿತವಾದವು. ವಿನೋದ ನಾಟಕಗಳೂ ಕಾಣಿಸಿಕೊಂಡವು.

	1795ರಿಂದ 1831ರವರೆಗಿನ ಅವಧಿಯ ಪೋಲಿಷ್ ಸಾಹಿತ್ಯದಲ್ಲಿ ಸಮೃದ್ಧಿಯ ಯುಗ ಅಭಿಜಾತ ಸಾಹಿತ್ಯದ ಮನೋಧರ್ಮ ಮತ್ತು ರೊಮ್ಯಾಂಟಿಸಿಸಂ ಎರಡೂ ಈ ಅವಧಿಯಲ್ಲಿ ಅಭಿವ್ಯಕ್ತವಾದವು. ರೊಮಾಂಟಿಕ್ ಸಾಹಿತ್ಯದ ಮೇಲೆ ಜರ್ಮನ್ ಕವಿಗಳೂ ಇಂಗ್ಲಿಷ್ ಕವಿ ಲಾರ್ಡ್ ಬೈರನನೂ ಪ್ರಭಾವ ಬೀರಿದರು. 1831-64ರ ಅವಧಿಯಲ್ಲಿ ಪೋಲಿಷ್ ರೊಮಾಂಟಿಕ್ ಸಾಹಿತ್ಯವು ಶ್ರೀಮಂತವಾಯಿತು. ಆ್ಯಡಂ ಮಿಕಿವಿಜ್ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ. `ಬ್ಯಾಲಡ್ಸ್ ಅಂಡ್ ರೊಮಾನ್‍ಸಸ್ (1822) ಸಂಗ್ರಹದಲ್ಲಿ ಇವನು ಜಾನಪದ ಮೂಲ ಉದ್ದೇಶ (ಪೋಲಿಷ್)ಗಳನ್ನು ಬಳಸಿಕೊಂಡ ಈ ಅವಧಿಯಲ್ಲೇ ಐತಿಹಾಸಿಕ ಕಾದಂಬರಿಗಳೂ ರಚಿತವಾದವು.

	`ತರುಣ ಪೋಲೆಂಡ್ ಯುಗಕ್ಕೆ ಸೇರಿದ ಸ್ಟಾನಿಸಾ ರೇಮಂಟ್‍ನ `ದಿ ಪೆಸೆಂಟ್ಸ್ (1943) ಒಂದು ಸುದೀರ್ಘ ಮಹಾಕಾವ್ಯ. ಪೋಲೆಂಡಿನ ಒಂದು ಹಳ್ಳಿಯ ಒಂದು ವರ್ಷದ ಬದುಕನ್ನು ಚಿತ್ರಿಸುತ್ತದೆ. (ಈತನಿಗೆ 1924ರಲ್ಲಿ ನೊಬೆಲ್ ಪ್ರಶಸ್ತಿ ಬಂದಿತು).

	18ನೆಯ ಶತಮಾನದಿಂದ ಹೋಳುಗಳಾಗಿದ್ದ ಪೋಲೆಂಡ್ ಮೊದಲನೆಯ ಮಹಾಯುದ್ಧದ ನಂತರ ಸ್ವತಂತ್ರ ದೇಶವಾಯಿತು. ಈ ಕಾಲದ ಸಾಹಿತ್ಯ ಶ್ರೀಮಂತವಾದದ್ದು ವೈವಿಧ್ಯ ಪೂರ್ಣವಾದದ್ದು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಸಾಹಿತ್ಯ ರಚನೆ ಕುಂಠಿತವಾಯಿತು, ಆದರೆ ಅನಂತರ ಮತ್ತೆ ಶ್ರೀಮಂತವಾಯಿತು.

	ಇಪ್ಪತ್ತನೆಯ ಶತಮಾನವು ಹಲವರು ಶ್ರೇಷ್ಠ ಸಾಹಿತಿಗಳನ್ನು ಕಂಡಿತು. ಲಿಯೊಸಲ್ಡ್ ಸ್ಟಾಫ್, ಜೂಲಿಯನ್ ಟುನಿಮ್, ಜಾನ್ ಲೆಚರ್ (ಕಾವ್ಯನಾಮ ಲೆeóÉಕ್ ಸೆರಫಿನೊವಿeóï) ಇವರೆಲ್ಲ ಗಮನಾರ್ಹ ಕವಿಗಳು ಪ್ರಸಿದ್ಧ ಕವಿ eóÉಸ್‍ಯಾನ್ ಮಿಯೊeóï ಅಮೆರಿಕದಲ್ಲಿ ನಟಿಸಿದ, ಇವನಿಗೆ 1980ರಲ್ಲಿ ನೊಬೆಲ್ ಪ್ರಶಸ್ತಿ ಸಂದಿತು. ನಾಜಿóಗಳು ಪೋಲೆಂಡನ್ನು ಆಕ್ರಮಿಸಿದ್ದು, ಅವರ ಭಯಂಕರ ಆಡಳಿತ ಇವು ಹಲವು ಕಾದಂಬರಿಗಳಲ್ಲಿ ನಿರೂಪಿತವಾದವು. ಈಗ ಪೋಲೆಂಡಿನಲ್ಲಿ ವೈಜ್ಞಾನಿಕ ಕಲ್ಪನಾ ಸಾಹಿತ್ಯ (ಸೈನ್ಸ್ ಫಿಕ್‍ಷನ್) ಜನಪ್ರಿಯವಾಗಿದೆ.
										 ಪರಿಷ್ಕರಣೆ
									 ಪ್ರೊ.ಎಲ್.ಎಸ್.ಎಸ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ